ಆಟಿ ಮಾಸದಲ್ಲಿ ಬರುವ ಅಮಾವಾಸ್ಯೆಯೇ ಆಟಿ ಅಮಾವಾಸ್ಯೆ. ತುಳುನಾಡಿನವರಿಗೆ ಇದು ವಿಶೇಷ ದಿನ. ಈ ದಿನ ತುಳುವರು ಹಾಲೆ ಮರದ ಕೆತ್ತೆಯನ್ನು ಮರದಿಂದ ಕೊರೆದು ತೆಗೆದು ಕಷಾಯವನ್ನು ಕುಡಿಯುತ್ತಾರೆ. ಆಟಿ ಎಂಬುದು ತುಳುನಾಡಿನಲ್ಲಿ ಒಂದು ತಿಂಗಳ ಹೆಸರು. ಶರತ್ಕಾಲವನ್ನು ಅನಿಷ್ಟದ ತಿಂಗಳು ಎಂದು ಕರೆಯಲಾಗುತ್ತದೆ. ಏಕೆಂದರೆ ಆಗಸ್ಟ್ ತಿಂಗಳಲ್ಲಿ ಕೀಟಗಳ ಕಾಟ ಹೆಚ್ಚು. ಅಥವಾ ತುಳುನಾಡಿದ ಭಾಗದಲ್ಲಿ ಹೆಚ್ಚಾಗಿ ಮಳೆ ಬರುತ್ತದೆ. ಇದರಿಂದ ಹೆಚ್ಚಿನವರಿಗೆ ಮನೆಯಿಂದ ಹೊರ ಬರಲು ಕಷ್ಟವಾಗುತ್ತದೆ. ಅದಕ್ಕಾಗಿಯೇ ಬರುವ ಅನಿಷ್ಟಗಳನ್ನು ಕಳೆಯಲು ಆಟಿಕಳೆಂಜ ಆಟಿ ತಿಂಗಳಿನಲ್ಲಿ ಬರುತ್ತಾನೆ. ಹಾಗಾಗಿ ಆಟಿ ಮಾಸದ ಅಮಾವಾಸ್ಯೆ ತುಳುನಾಡಿನ ಎಲ್ಲರಿಗೂ ವಿಶೇಷವಾದ ದಿನ. == ಉಲ್ಲೇಖಗಳು ==